ಮದುವೆಯಾಗದೆ ಗಂಡನಿಲ್ಲದೆ ಅವಳಿ ಜವಳಿಗೆ ಮಗುವಿಗೆ ತಾಯಿತನ ಕೊಡಲು ಮುಂದಾದ ಭವಾನ ರಾಮಣ್ಣ

ಖ್ಯಾತ ನಟಿ, ರಾಜಕಾರಣಿ, ಡ್ಯಾನ್ಸರ್ ಭಾವನಾ ರಾಮಣ್ಣ ಅವರು ಮದುವೆಯಾಗದೆ, 40ನೇ ವಯಸ್ಸಿನಲ್ಲಿ ತಾಯಿಯಾಗುತ್ತಿದ್ದಾರೆ. ಭಾವನಾ ಈಗ ಆರು ತಿಂಗಳು ಗರ್ಭಿಣಿಯಾಗಿದ್ದು, ಅವಳಿ ಮಗು ಅಂತೆ. ಈ ಬಗ್ಗೆ ಸ್ವತಃ ಭಾವನಾ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಪಾಲಕರು, ಮೂವರು ಒಡಹುಟ್ಟಿದವು, ಸಂಬಂಧಿಕರು, ಸ್ನೇಹಿತರು ಇರುವ ಮನೆಯಲ್ಲಿ ನಾನು ಬೆಳೆದೆನು. ನನಗೆ ಮಕ್ಕಳೆಂದರೆ ತುಂಬ ಇಷ್ಟ. ಆದರೆ ನಾನು 20ನೇ ವಯಸ್ಸಿನಲ್ಲಿ ಮಗು ಮಾಡಿಕೊಳ್ಳುವ ಬಗ್ಗೆ ಯೋಚಿಸಿರಲಿಲ್ಲ. ನನಗೆ 30 ವಯಸ್ಸು ಆದಾಗ ಲವ್‌ಮಾಡಲು ರೆಡಿ ಇದ್ದೆ. 40 ಇದ್ದಾಗ ಮಗು ಮಾಡಿಕೊಳ್ಳೋದನ್ನು ಇಗ್ನೋರ್ ಮಾಡಲು ಆಗೋದಿಲ್ಲ. ಈ ವರ್ಷಾಂತ್ಯದಲ್ಲಿ ನಾನು ಅವಳಿ ಮಗುವನ್ನು ನಿರೀಕ್ಷೆ ಮಾಡ್ತಿದ್ದೇನೆ ಎಂದು ಹೇಳಿದ್ದಾರೆ.
ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿರುವ ಭಾವನಾ ರಾಮಣ್ಣ ಅವರು ಮದುವೆಯಾಗದೆ, ಮಗುವಿನ ನಿರೀಕ್ಷೆಯಲ್ಲಿದ್ದಾರೆ. ನಾನು ಮದುವೆ ಬಗ್ಗೆ ಯೋಚನೆ ಮಾಡಿಲ್ಲ. ಆದರೆ ತಾಯಿ ಆಗುವ ಆಸೆ ಇತ್ತು, ಅದೀಗ ನೆರವೇರುತ್ತಿದೆ. ತುಂಬ ಸಮಯದಿಂದ ಮಹಿಳೆಯರು ಸಿಂಗಲ್ ಪೇರೆಂಟ್ ಆಗೋದನ್ನು ಕಾನೂನು ಬೆಂಬಲಿಸಿರಲಿಲ್ಲ. ಕಾನೂನು ಕೆಲಸ ಆದಬಳಿಕ ನಾನು ಈ ನಿರ್ಧಾರಕ್ಕೆ ಬಂದೆ. ಐವಿಎಫ್ ಕ್ಲಿನಿಕ್ ಹೋಗಿ ನಾನು ಈ ಬಗ್ಗೆ ವಿಚಾರಿಸಿದೆ ಎಂದು ಹೇಳಿದ್ದಾರೆ.
Recent Comments