ಭರ್ಜರಿ ಹದಿಮೂನ್ ಮುಗಿಸಿ ಹೊರಬಂದ ವೈಷ್ಣವಿ ಗೌಡ, ಹಿಂದಿವಾಲ ಫುಲ್ ಫಿದಾ

ಸೆಲೆಬ್ರಿಟಿಗಳು ಸಾಮಾನ್ಯವಾಗಿ ಮದುವೆ ಆದ್ಮೇಲೆ ವಿದೇಶಗಳಿಗೆ ಹನಿಮೂನ್ ಹೋಗೋದು ಕಾಮನ್. ಕಿರುತೆರೆ ಧಾರಾವಾಹಿ ಹಾಗೂ ಬಿಗ್‌ಬಾಸ್ ಖ್ಯಾತಿಯ ವೈಷ್ಣವಿ ಗೌಡ 2025ರ ಜೂನ್ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಅನುಕೂಲ್ ಮಿಶ್ರಾ ಜೊತೆ ಹಸೆಮಣೆ ಏರಿದ್ದ ನಟಿ ವೈಷ್ಣವಿ ಗೌಡ ಸದ್ಯ ಹನಿಮೂನ್ ಟ್ರಿಪ್‌ನಲ್ಲಿದ್ದಾರೆ. ಪತಿ ಜೊತೆ ಇತ್ತೀಚಿಗೆ ಉತ್ತರಾಖಂಡ್ ಋಷಿಕೇಶ್ ಬಳಿಯಿರುವ ಶಿವಪುರಿಯಲ್ಲಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದರು.
ವೈಷ್ಣವಿ ಗೌಡ ಹನಿಮೂನ್ ಟ್ರಿಪ್ ಅನ್ನ ಸಖತ್ ಎಂಜಾಯ್ ಮಾಡ್ತಿದ್ದು, ಡ್ಯಾನ್ಸ್ ಮಾಡಿರುವ ವಿಡಿಯೋವನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋ ಕ್ರೆಡಿಟ್ ಹಸ್ಬಂಡ್ ಎಂದು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ನೋಡಿದ ವೈಷ್ಣವಿ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಖುಷಿಯಿಂದ ಲೈಕ್ ಮಾಡಿದ್ರೆ ಇನ್ನು ಕೆಲವ್ರು ಈ ಆಷಾಡ ಮಾಸದಲ್ಲಿ ಯಾಕೆ ಹನಿಮೂನ್ ಬೇರೆ ಟೈಂ ಇರಲಿಲ್ಲವಾ ಅಂತಾ ಪ್ರಶ್ನೆ ಮಾಡಿದ್ದಾರೆ.
Recent Comments