ಇನ್ನೂ ಮದುವೆಯಾಗದ ರಚ್ಚುನಾ ನೋಡಿದ್ರೆ ಕಂಟ್ರೋಲ್ ಮಾಡೋಕೆ ಆಗಲ್ಲ, ಮದುವೆಯಾದ ಡಾಲಿ ಬಾಯ್ ಯಿಂದ ಇಂದೆಂತಹ ಮಾತು

ರಚಿತಾ ರಾಮ್ ಅವರು ಡಿಂಪಲ್ ಕ್ವೀನ್. ರವಿಚಂದ್ರನ್ ಅವರು ಕ್ರೇಜಿ ಸ್ಟಾರ್. ಇವರಿಬ್ಬರೂ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ವೇದಿಕೆ ಮೇಲೆ ಗಮನ ಸೆಳೆಯುತ್ತಿದ್ದಾರೆ. ತೆರೆಮೇಲೆ ‘ರೊಮ್ಯಾಂಟಿಕ್ ಆಗಿರೋದು’ ಅನ್ನೋ ವಿಚಾರದಲ್ಲಿ ಇಬ್ಬರೂ ಮುಂದಿದ್ದಾರೆ. ವೇದಿಕೆ ಮೇಲೆ ಡ್ರೋನ್ ಪ್ರಾತಪ್​ಗೆ ಕಣ್ಣು ಹೊಡೆಯೋಕೆ ಬಂದಿರಲಿಲ್ಲ. ಆಗ ರವಿಚಂದ್ರನ್ ಅವರು ಪ್ರತಾಪ್​ಗೆ ಇದನ್ನು ಕಲಿಸಿಕೊಟ್ಟರು. ಆದರೆ, ರವಿಚಂದ್ರನ್ ಅವರನ್ನೂ ಮೀರಿಸುವಂತೆ ರಚಿತಾ ರಾಮ್ ಅವರು ಕಣ್ಣು ಹೊಡೆದು ತೋರಿಸಿದ್ದಾರೆ.

ಆದರೆ ಇದೀಗ ಜೀ ಕನ್ನಡದ ಬ್ಯಾಚುಲರ್ಸ್​ ಪಾರ್ಟಿ ರಿಯಾಲಿಟಿ ಷೋನಲ್ಲಿ, ತೀರ್ಪುಗಾರರಾಗಿರುವ ರವಿಚಂದ್ರನ್​ ಅವರು ರಚಿತಾ ರಾಮ್​ ಮದುವೆಯ ವಿಷಯ ರಿವೀಲ್​ ಮಾಡಿದ್ದಾರೆ. ಅಷ್ಟಕ್ಕೂ ಆಗಿದ್ದು ಏಕೆಂದರೆ, ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ, ಧನಂಜಯ್, ಮಲೈಕಾ ವಸುಪಾಲ್ ನಟನೆಯ ಚಿತ್ರ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅವರೆಲ್ಲಾ ಚಿತ್ರದ ಪ್ರೊಮೋಷನ್​ಗಾಗಿ ಈ ಷೋಗೆ ಬಂದಿದ್ದರು. ಈ ಸಮಯದಲ್ಲಿ ಈಚೆಗೆ ಮದ್ವೆಯಾದ  ನಟ ಡಾಲಿ ಧನಂಜಯ್‌ ಬ್ಯಾಚುಲರ್‌ ಲೈಫಿನ ಬಗ್ಗೆ ಮಾತನಾಡುತ್ತಿದ್ದರು.

ಆ ಸಮಯದಲ್ಲಿ ಮದ್ವೆಗೂ ಮುನ್ನ, ಮದ್ವೆ ಆದ್ಮೇಲೆ ಹೇಗಿದೆ ಜೀವನ ಕೇಳಿದಾಗ ಅವರು,  ಮದುವೆ ಮೊದಲು ನಾಗ ಸಿಕ್ಕರೆ ಅಲ್ಲೇ ಸೆಟಲ್, ನಿರಂಜನ್ ಸಿಕ್ಕರೆ ಅಲ್ಲೇ ಸೆಟಲ್. ಈಗ ಮನೆಗೆ ಹೋಗಬೇಕು ಎಂದು ತಮಾಷೆಯಾಗಿ ಹೇಳಿದರು. ಇದೇ ಸಂದರ್ಭದಲ್ಲಿ ಡಾಲಿ ಅವರು,  ರಚಿತಾ ರಾಮ್   ಇನ್ನೂ ಬ್ಯಾಚುಲರ್​ ಆಗಿರೋದು ನೋಡಿ ಹೊಟ್ಟೆ ಉರಿಯುತ್ತಿದೆ’ ಎಂದಾಗಿ ಒಗಟಾಗಿ ರವಿಚಂದ್ರನ್​ ಅವರು ಇದೇ ವರ್ಷ ಅವರ ಮದುವೆಯಾಗುತ್ತದೆ ಎಂದುಬಿಟ್ಟರು. ಇದು ಹೇಳುತ್ತಿದ್ದಂತೆಯೇ ಯುವಕರ ಹಾರ್ಟ್​ ಬ್ರೇಕ್​ ಆಗಿ ಹೋಗಿದೆ. ರವಿಚಂದ್ರನ್​ ಹೇಳಿರುವ ಹಿಂದಿನ ಅರ್ಥವೇನು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. 

ಭರ್ಜರಿ ಬ್ಯಾಚುಲರ್ಸ್ ವೇದಿಕೆ ಮೇಲೆ ರವಿಚಂದ್ರನ್ ಹಾಗೂ ರಚಿತಾ ರಾಮ್ ಅವರು ಎಲ್ಲರ ಗಮನ ಸೆಳೆಯುತ್ತಾ ಇದ್ದಾರೆ. ಇವರು ಆಗಾಗ ಪರಸ್ಪರ ಮಾತುಕತೆ ನಡೆಸಿಕೊಳ್ಳುತ್ತಾ ಇರುತ್ತಾರೆ. ರವಿಚಂದ್ರನ್ ಅವರು ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾರೆ. ಈಗ ರವಿಚಂದ್ರನ್ ಅವರು ರಚಿತಾ ರಾಮ್ ಜೊತೆ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದ ವಿಡಿಯೋ ಗಮನ ಸೆಳೆದಿದೆ.

You may also like...

Leave a Reply

Your email address will not be published. Required fields are marked *